ಲಿಂಗಸೂಗೂರು: ಕಲಬುರಗಿಯಲ್ಲಿ ಜರುಗಿದ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಂಡಿಬೆಲೆ ಶಾಮಣ್ಣ ಸ್ಮಾರಕ ರಾಜ್ಯ ಪ್ರಶಸ್ತಿ ಯನ್ನು ಪಡೆದುಕೊಂಡು ರಾಯಚೂರು ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ ಮುದಗಲ್ ಪಟ್ಟಣದ ವಿಜಯವಾಣಿ ವರದಿಗಾರ ಡಾ॥ ಶರಣಯ್ಯ ಒಡೆಯರ್ ರವರಿಗೆ ಹಾಗೂ ವಿಶೇಷ ಪ್ರಶಸ್ತಿ ಪಡೆದ ಅಬ್ದುಲ್ ಅಜೀಜ್, ಸುಶಿಲೇಂದ್ರ ಸೋದೆಗಾರ ರವರಿಗೆ ರಾಯಚೂರು ಹಿರಿಯ ಪತ್ರಕರ್ತರು ಮತ್ತು ಲಿಂಗಸೂಗೂರು ಪತ್ರಕರ್ತರಿಂದ ಆತ್ಮಿಯವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಸವರಾಜ ನಾಗಡದಿನ್ನಿ, ಹಿರಿಯ ಪತ್ರಕರ್ತರಾದ ಅರವಿಂದ ಕುಲಕರ್ಣಿ, ಗುರುನಾಥ, ಸತ್ಯನಾರಾಯಣ, ವೀರೇಶ ಸೌದ್ರಿ ಮಸ್ಕಿ, ಹಾಗೂ ಲಿಂಗಸುಗೂರಿನ ಬಿಎ.ನಂದಿಕೋಲಮಠ, ಅಮರೇಶ ಬಲ್ಲಟಗಿ, ಖಾಜಾಹುಸೇನ, ಸಿದ್ದನಗೌಡ ಹಟ್ಟಿ,ಅಮರಯ್ಯ ಗಂಟಿ, ಘನಮಠದಯ್ಯ, ಪಂಪಾಪತಿ, ಹನುಮಂತ ಕನ್ನಾಳ, ಬಸವರಾಜ ಆಶಿಹಾಳ, ಮಲ್ಲಿಕಾರ್ಜುನ, ಸಿದ್ದು ದೇವಗಲ್, ದುರಗಪ್ಪ, ಬಸಲಿಂಗಪ್ಪ ಸೇರಿದಂತೆ ಅನೇಕ ಪತ್ರಕರ್ತರು ಇದ್ದರು.