33-ಡಿವಾಯ್ಎಸ್ಪಿ – 132 ಇನ್ ಸೆಪಕ್ಟರಗಳ್ ವರ್ಗಾವಣೆ
Voice Of Janata – Editor : ಪೋಲಿಸ್ ಇಲಾಖೆಗೆ ರಾಜ್ಯ ಸರ್ಕಾರ ಸರ್ಜರಿ ಮಾಡಿದ್ದು, 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ಇದೇ ವೇಳೆ ಒಬ್ಬ ಡಿವೈಎಸ್‌ಪಿ ವರ್ಗಾವಣೆಯನ್ನು ರದ್ದುಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಹೊಸದಾಗಿ ಸೃಜನೆಯಾದ ಇನ್ ಸ್ಪೆಕ್ಟರ್ ಮಾಡಿಲಾಗಿದೆ. ಈ ಬಗ್ಗೆ ಪೋಲಿಸ್ ಇಲಾಖೆ ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಘಟಕಾಧಿಕಾರಿ – ಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸುವಂತೆ ತಿಳಿಸಲಾಗಿದೆ.
ಯು.ಡಿ. ಕೃಷ್ಣಕುಮಾರ್ (ಡಿವೈಎಸ್‌ಪಿ, ಬಿಡಿಎ), ಟಿ.ಎಂ.ಶಿವಕುಮಾರ್ (ಎಸಿಪಿ, ಮಡಿವಾಳ ಉಪವಿಭಾಗ), ಎಚ್.ಬಿ.ರಮೇಶ್ ಕುಮಾರ್ (ಎಸಿಪಿ, ವಿವಿ ಪುರಂ ಉಪವಿಭಾಗ), ಎಂ.ಎನ್.ನಾಗರಾಜ್ (ಎಸಿಪಿ, ಸಿಸಿಬಿ ಬೆಂಗಳೂರು) ಅನುಷಾರಾಣಿ (ಎಸಿಪಿ, ಡಿಸಿಆರ್‌ಇ, ಮೈಸೂರು) ಸೇರಿದಂತೆ ಒಟ್ಟು 33 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.
ಇನ್ ಸ್ಪೆಕ್ಟರ್ ಸ್ವರ್ಣ ಜಿ.ಎಸ್. (ಆಲನಹಳ್ಳಿ ಪೊಲೀಸ್ ಠಾಣೆ, ಮೈಸೂರು), ಇನ್‌ಸ್ಪೆಕ್ಟರ್ ರವಿಕಿರಣ್ (ಸಂಪಂಗಿರಾಮನಗರ ಪೊಲೀಸ್ ಠಾಣೆ), ಮಂಜುನಾಥ್ ಜಿ ಹೂಗಾರ್ (ಕುಂಬಳಗೋಡು ಠಾಣೆ), ನರೇಂದ್ರ ಬಾಬು (ಕಾಟನ್‌ಪೇಟೆ ಪೊಲೀಸ್ ಠಾಣೆ), ಸಂತೋಷ್ ಕೆ (ಹಲಸೂರು ಪೊಲೀಸ್ ಠಾಣೆ), ದೀಪಕ್ ಆರ್ (ಜಯನಗರ ಪೊಲೀಸ್ ಠಾಣೆ) ಸೇರಿ ಒಟ್ಟು 132 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಆದೇಶ ರದ್ದು
ಡಿವೈಎಸ್‌ಪಿ ನೀಲಪ್ಪ ಮಲ್ಲಪ್ಪ ಓಲೇಕಾರ್ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಖಾನಾಪುರ ಪಿಟಿಎಸ್‌ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರ ವರ ವರ್ಗಾವಣೆಯನ್ನು ರದ್ದುಗೊಳಿಸಿದ್ದು, ಅವರಿಗೆ ಲೋಕಾಯುಕ್ತದಲ್ಲೇ ಮುಂದುವರಿಯಲು ಸೂಚಿಸಲಾಗಿದೆ.