ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಣ್ಣೂರ,ಉಪಾಧ್ಯಕ್ಷ ನಾಗರಬೆಟ್ಟ ಅವಿರೋಧವಾಗಿ ಆಯ್ಕೆ.
ಮುದ್ದೇಬಿಹಾಳ : ತಾಲೂಕಿನ ಯರಝರಿ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸನ್ 2026-31ರ ಅವಧಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸೋಮವಾರ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಬೀರಪ್ಪ ಕಣ್ಣೂರ, ಉಪಾಧ್ಯಕ್ಷ ಕಾಮಣ್ಣ ನಾಗರಬೆಟ್ಟ ತಲಾ ಒಂದು ನಾಮಪತ್ರ ಸಲ್ಲಿಸಿದ ಅಧ್ಯಕ್ಷರಾಗಿ ಬೀರಪ್ಪ ಜಿ.ಕನ್ನೂರ, ಉಪಾಧ್ಯಕ್ಷರಾಗಿ ಕಾಮಣ್ಣ ಹ.ನಾಗರಬೆಟ್ಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಪತ್ತಿನ ಸಂಘದ ನಿರ್ದೇಶಕರಾದ ಪಿರಗಣ್ಣ ನರಸಣಗಿ, ಬಸವರಾಜ ತಳ್ಳಿಕೇರಿ,ಜುಮ್ಮಣ್ಣ ಹುಲ್ಲೂರ,ಭೀಮಣ್ಣ ಕೋಳೂರ,ಫಾತೀಮಾ ಹಡಗಲಿ, ಶಾಂತಮ್ಮ ಮಠ, ಶಿವಪ್ಪ ಕನ್ನೂರ, ಲಕ್ಷರಿಣ ಪಟ್ಟಣ,ಸಿದ್ದಪ್ಪ ಚಲವಾದಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮಲ್ಲು ಅಪರಾಧಿ,ಮಂದೆಪ್ಪ ಗುರಿಕಾರ,ಲಕ್ಕಪ್ಪ ಹುಲ್ಲೂರ, ಸೋಮಪ್ಪ ಕಣ್ಣೂರ, ನಿಂಗಪ್ಪ ಹುಲ್ಲೂರ, ಬಸಪ್ಪ ಕೌಲಗಿ, ಕುಮಾರ ಯಲಗೋಡ, ಸಾಹೇಬಪಟೇಲ್ ಮೊಕಾಶಿ, ಬಸವರಾಜ ನರಸಣಗಿ, ಸಿಐಒ ಮಾಳಪ್ಪ ಕನ್ನೂರ, ಸಿಬ್ಬಂದಿ ಮೈಬೂಬ ಚಪ್ಪರಬಂದ, ಶೃತಿ ಕನ್ನೂರ, ಶರೀಫ ತಾಳಿಕೋಟಿ ಸೇರಿದಂತೆ ಭಾಗವಹಿಸಿದ್ದರು.


















