ರಾಯಚೂರು : ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 24 ಗಂಟೆಗಳ ಕಾಲ ಮಧ್ಯ ಮಾರಾಟ ನಿಷೇಧ ಹೇರಿದ ಜಿಲ್ಲಾಡಳಿತ.
ಪ್ರಗತಿಪರ-ದಲಿತಪರ ಸಂಘಟನೆಗಳ ಒಕ್ಕೂಟವು ರಾಯಚೂರು ಸಂಪೂರ್ಣ ಬಂದ್ ಕರೆ ನೀಡಿದೆ, ಹಿನ್ನೆಲೆಯಲ್ಲಿ ನಗರದಾದ್ಯಂತ ಬಂದ್ ಕಾವು ಹೆಚ್ಚಾಗಿ ಕಾಣುತ್ತಿರುವುದರಿಂದ, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರಾಯಚೂರು ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ದಿನಾಂಕ:09-02-2022 ರ ರಾತ್ರಿ 08-00 ಗಂಟೆಯಿಂದ ದಿನಾಂಕ:10-02-2022 ರಾತ್ರಿ 08-00 ಗಂಟೆಯವರಿಗೆ ರಾಯಚೂರು ತಾಲೂಕಿನಾದ್ಯಂತ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಮದ್ಯ ಮಾರಾಟ ಮಾಡುವ ಬಾರ್, ಅಂಗಡಿ, ಸಗಟು, ಚಿಲ್ಲರೆ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಲು ಮತ್ತು ಮಧ್ಯ ಸಾಗಾಣಿಕೆ ಮಾಡುವುದನ್ನು ಹಾಗೂ ಹೊರಗಿನಿಂದ ಮದ್ಯ ಇತ್ಯಾದಿಗಳನ್ನು ತಂದು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲಗಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ಹೊರಡಿಸಿದ್ದಾರೆ.
ಇನ್ನೂ ಅಬಕಾರಿ ಕಾಯ್ದೆ 1965 ರ ಕಲಂ 21 (1) ರನ್ವಯ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರಾಯಚೂರು ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಮಧ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.