ಸ್ವಗ್ರಾಮದ ಶಾಲೆಗೆ 20 ಸಾವಿರ ರೂಪಾಯಿ ದೇಣಿಗೆ ನೀಡಿದ : ತಾಲ್ಲೂಕು ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಸುಣಗಾರ..
ಇಂಡಿ : ಸ್ವಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 20 ಸಾವಿರ ರೂಪಾಯಿ ದೇಣಿಗೆ ನೀಡಿದ ತಾಲ್ಲೂಕು ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ ಮುಖ್ಯ ಗುರು ಅಂಬಣ್ಣ ಸುಣಗಾರ ಅವರು ಗ್ರಾಮಸ್ಥರ ಮೆಚ್ಚುಗೆ ಪಾತ್ರರಾಗಿದ್ದಾರೆ.
ತಾಲ್ಲೂಕಿನ ಹಿರೇಮಸಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ನಿಮತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ೨೦ ಸಾವಿರ ರೂಪಾಯಿ ದೇಣಿಗೆ ನೀಡಿ ಮಾತಾನಾಡಿದರು. ನಾನು ಇದೇ ಶಾಲೆಯಲ್ಲಿ ಕಲಿತು, ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮತ್ತು ತಾಲ್ಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ನಾಗಿದ್ದೆನೆ. ಅದಕ್ಕೆ ಈ ನನ್ನ ಸ್ವಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಕಾರಣ. ಒಂದು ವೇಳೆ ಅಕ್ಷರ ಕಲಿಯಿದಿದ್ದರೆ ಏನಾಗಿರುತ್ತಿತ್ತು ಆಲೋಚಿಸಿ. ಹಾಗಾಗಿ ಎಲ್ಲಾ ವಿಧ್ಯಾರ್ಥಿಗಳು ತಾಯಿ ತಂದೆ ಹೇಳುವ, ಗುರುಗಳು ಮತ್ತು ಹಿರಿಯರು ಮಾತುಗಳು, ವಿಚಾರಗಳು, ಚಾಚು ತಪ್ಪದೆ ಪಾಲಿಸಿದ್ರೆ ನಿಮ್ಮ ಜೀವನ ಸುಂದರ ಬದುಕು ಬಂಗಾರವಾಗುತ್ತೆ ಎಂದು ಹೇಳಿದರು.
ಇನ್ನೂ ಶಾಲೆಯ ಪ್ರಭಾರಿ ಮುಖ್ಯ ಗುರು ಆನಂದ ಕೆಂಭಾವಿ ಹಾಗೂ ಶಿಕ್ಷಕ ಬಳಗದವರು ಅಂಬಣ್ಣ ಸುಣಗಾರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್ ಆರ್ ನಡುಗಡ್ಡಿ ಹಾಗೂ ತಾಂಬಾ ವಲಯದ ಬಿ ಆರ್ ಪಿ ಆರ್ ವಿ ಪಾಟೀಲರು ಅಭಿನಂದಿಸಿದ್ದಾರೆ.