ರಾಯಚೂರು : ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರಕಾರ ಉತ್ತಮ ಅರೋಗ್ಯ ವ್ಯವಸ್ಥೆಯನ್ನು ಮಾಡಿದೆ.ಪ್ರಥಮ ಬಾರಿಗೆ ದೇಶದಲ್ಲಿ 2 ಲಕ್ಷ 31 ಸಾವಿರ ಕೋಟಿ ಅನುದಾನವನ್ನು ಆರೋಗ್ಯಕ್ಕಾಗಿ ಮೀಸಲಿಟ್ಟಿದೆ ಎಂದು ಕೇಂದ್ರ ಕಲ್ಲಿದ್ದಲು,ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಅವರಿಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ 75ನೇ ಆಜಾದಿ ಕಾ ಅಮೃತ್ ಮಹೊತ್ಸವ ಅಂಗವಾಗಿ ತಾಲೂಕು ಮಟ್ಟದ ಆರೋಗ್ಯ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2014 ರಲ್ಲಿ 383 ಮೆಡಿಕಲ್ ಕಾಲೇಜು ಇದ್ದರೆ ಇಂದು ಬಿಜೆಪಿ ಕೇಂದ್ರ ಸರಕಾರ 596 ಮೆಡಿಕಲ್ ಕಾಲೇಜುಗಳು ಈ ದೇಶದಲ್ಲಿ ಸ್ಥಾಪನೆ ಮಾಡಲಾಗಿದೆ.ಮುಂಬರುವ ದಿನಗಳಲ್ಲಿ ಪ್ರತಿ ಮೂರು ಜಿಲ್ಲೆಗಳಿಗೊಂದು ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದರು. ಈ ಹಿಂದೆ ಪ್ರತಿ ವರ್ಷಕ್ಕೆ 54 ಮೆಡಿಕಲ್ ಸೀಟುಗಳು ಸಿಗುತ್ತಿತ್ತು.ಆದರೆ ಇಂದು 85 ಸಾವಿರ ಮೆಡಿಕಲ್ ಸೀಟುಗಳು ಸಿಗುತ್ತಿವೆ ಎಂದರು. ರಾಜ್ಯದ ಹೊಸ 4 ಮೆಡಿಕಲ್ ಕಾಲೇಜಿಗೆ ಕೇಂದ್ರ ಸರ್ಕಾರದಿಂದ ಶೇ.60 ಹಾಗೂ ರಾಜ್ಯ ಸರಕಾರದಿಂದ ಶೇ 40 ಅನುದಾನ ನೀಡಲಾಗುತ್ತದೆ ಎಂದರು. ಈ ಹಿಂದೆ ಪಿಜಿ ಸೀಟುಗಳು 34 ಸಾವಿರ ಇತ್ತು ಇಂದು 56 ಸಾವಿರ ಪಿಜಿ ಸೀಟುಗಳು ಮಾಡಿದ್ದೇವೆ.ಅದೇ ರೀತಿ 7 ಏಮ್ಸ್ ಸಂಸ್ಥೆಗಳು ಇತ್ತು ಈಗ 28 ಏಮ್ಸ್ ಸಂಸ್ಥೆಗಳು ಸ್ಥಾಪನೆ ಮಾಡಲಾಗಿದೆ ಎಂದರು. ಪ್ರಧಾನಿ ಮಂತ್ರಿ ಆಯುಷ್ ಮನ್ ಭಾರತ ಯೋಜನೆಯಲ್ಲಿ ರಾಜ್ಯದಲ್ಲಿ 1 ವರ್ಷದಲ್ಲಿ 36 ಸಾವಿರ ಜನರು ಚಿಕಿಸ್ತೆ ಪಡೆಯುತ್ತಿದ್ದಾರೆ. 175 ಕೋಟಿ ಜನರಿಗೆ ವ್ಯಾಕ್ಸಿನೇಷನ್ ಕೊಟ್ಟಿದ್ದೇವೆ.1919 ರಲ್ಲಿ ಇದೆ ರೀತಿಯಾದ ರೋಗ ಬಂದಿತ್ತು ಜಗತ್ತಿನಲ್ಲಿ 5 ಕೋಟಿ ಜನರು ಸತ್ತಿದ್ದರು.ಭಾರತದಲ್ಲಿ 2 ವರೆ ಕೋಟಿ ಜನರು ಸತ್ತಿದ್ದರು ಅದರಲ್ಲಿ 1 ವರೆ ಕೋಟಿ ಜನರು ಹಸಿವಿನಿಂದ ಸತ್ತಿದ್ದರು ಎಂದು ದಾಖಲೆಗಳು ಹೇಳುತ್ತಿವೆ. ಆದರೆ ಈ ಬಾರಿ ಯಾರು ಕೂಡ ಹಸಿವು ನಿಂದ ಸತ್ತಿಲ್ಲ ಎಂದರು.
ಪ್ರತಿಯೊಬ್ಬರು ಅರೋಗ್ಯ ಕಡೆ ಹೆಚ್ಚು ಒತ್ತು ನೀಡಬೇಕು. ಯಾವುದೇ ಕಾಯಿಲೆ ಬಂದರೆ ಕೂಡಲೇ ವೈದ್ಯರ ಬಳಿ ಹೋಗಿ ಚಿಕಿಸ್ತೆ ಪಡೆಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ,ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ್ ಮುನೇನಕೊಪ್ಪ, ನಗರ ಶಾಸಕ ಡಾ. ಶಿವರಾಜ ಪಾಟೀಲ್, ನಾಯಕ,ಸಂಸದ ರಾಜಾ ಅಮರೇಶ್ವರ ನಾಯಕ, ಬಸನಗೌಡ ದದ್ದಲ್, ಜಿಲ್ಲಾಧಿಕಾರಿ,ಸಿಇಓ,ಎಸ್. ಪಿ ಸೇರಿದಂತೆ ಇತರರು ಉಪಸ್ಥಿತರಿದ್ದರು.