ಮಾಧ್ಯಮಗಳು ಭೀಮೆಗೆ ಅಪಮಾನ ಮಾಡುವ ಕಾರ್ಯ ಬಿಡಬೇಕು : ಕರವೇ ಅಧ್ಯಕ್ಷ ಬಾಳು ಮುಳಜಿ
ಇಂಡಿ: ಭೀಮಾನದಿ ಪಾತ್ರದಲ್ಲಿ ಹಲವು ಸಂತ ಮಹಾಂತರು, ಕವಿಗಳು, ಸಾಹಿತಿಗಳು ಆಗಿ ಹೋಗಿದ್ದಾರೆ. ಭೀಮಾನದಿ ಈ ಭಾಗದ ಪುಣ್ಯ ನದಿಯಾಗಿದ್ದು ಭೀಮಾತೀರ ಎಂದು ಬಿಂಬಿಸಿ ಮಾಧ್ಯಮಗಳು ಭೀಮೆಗೆ ಅಪಮಾನ ಮಾಡುವ ಕಾರ್ಯ ಮಾಡುತ್ತಿವೆ ಎಂದು ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಆರೋಪಿಸಿದರು.
ಭೀಮಾತೀರದಲ್ಲಿ ಹಲಸಂಗಿ ಗೆಳಯರ ಬಳಗದ ಸಿಂಪಿ ಲಿಂಗಣ್ಣ, ಮಧುರಚೆನ್ನರು ನಾಡಿಗೆ ಕೊಡುಗೆ ಕೊಟ್ಟಿದ್ದಾರೆ. ಭೀಮೆ ಖ್ಯಾತ ಸಾಹಿತಿಗಳಿಗೆ ಜನ್ಮ ನೀಡಿದ ಒಡಿಲು. ಬಂಥನಾಳದ Ã ಸಂಗನಬಸವ ಶಿವಯೋಗಿಗಳು, ತ್ರಿವಿಧ ದಾಸೋಹದ ತೀರ ಶೈಕ್ಷಣ ಕ ಕ್ರಾಂತಿಗೈದಿದ್ದರು. ತ್ರಿವಿಧಿ ದಾಸೋಹದ ಇಂಡಿ ತಾಲೂಕಿನ ಅಗರಖೇಡ ಶ್ರೀರಂಗರು ಕರ್ನಾಟಕ ರಾಜ್ಯದಲ್ಲೇ ಅತ್ತುತ್ಯಮ ನಾಟಕ ರಚನಾಕಾರರಾಗಿದ್ದು. ಭೀಮೆಯ ಒಡಲಿನಲ್ಲಿ ಹಲವು ಸಂತರು, ದಾರ್ಶನಿಕರು, ಪವಾಡ ಪುರುಷರು ಆಗಿ ಹೋಗಿದ್ದಾರೆ. ಕೇವಲ ಕೆಲವು ಕುಟುಂಬಗಳಿAದ ಇಡೀ ಭೀಮಾನದಿಗೆ ಕಪ್ಪು ಚುಕ್ಕೆ ಇಡುತ್ತಿರುವುದು ಸರಿಯಲ್ಲ ಎಂದರು.ಮಾಧ್ಯಮದವರು ಇನ್ನಾದರೂ ಭೀಮಾತೀರ ಎಂಬ ಪದ ಬಳಕೆ ಮಾಡಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹೇಶ ಹೂಗಾರ, ಪ್ರಶಾಂತ ,ಲಾಳಸಂಗಿ, ಪ್ರದೀಪ ಕರಜಗಿ, ಯಮನಪ್ಪ ಕೂಡಿಗನೂರ, ಮಹಾವೀರ ಕಾಮನಕೇರಿ, ಶಿವಾನಂದಯ್ಯ ಲಕ್ಕುಂಡಿಮಠ, ಮಲ್ಲು ಚಾಕುಂಡಿ, ಶ್ರೀಶೈಲ ಮದರಿ, ಅಪ್ಪು ಪ್ಯಾಟಿ, ಭೀಮಾಶಂಕರ ಆಳೂರ, ಆನಂದ ಕ್ಷತ್ರಿ, ರವ ಇ ಹೂಗಾರ, ರೇವಣಸಿದ್ದ ಅವರಾದಿ, ಸಂತೋಶ ಪಾಟೀಲ, ರಾಹುಲ್ ಮರಗೂರ, ±ಶಿವರಾಜ ಪಾಟೀಲ, ಮಹಾದೇವ ಬಗಲಿ ಸೇರಿದಂತೆ ಭೀಮಾನದಿ ಭಾಗದ ಗ್ರಾಮಗಳ ಹಲವು ಮುಖಂಡರು ಇದ್ದರು.