ಗ್ಯಾರೇಜ್ ಹಾಗೂ ಅಂಗಡಿಗಳಲ್ಲಿ ಕಾರ್ಮಿಕರ ಕರಪತ್ರ ಹಂಚಿದ ತಹಸಿಲ್ದಾರ್..
18 ವರ್ಷದ ಒಳಪಟ್ಟ ಮಕ್ಕಳನ್ನು ದುಡಿಸಿಕೊಳ್ಳುವ ಮಾಲಿಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ..!
ಹನೂರು : ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ತಹಸಿಲ್ದಾರ್ ರವರು ತಿಳಿಸಿದರು.
ಪಟ್ಟಣದಲ್ಲಿ ತಹಸಿಲ್ದಾರ್ ರವರ ನೇತೃತ್ವದಲ್ಲಿ ವಿವಿಧ ಅಂಗಡಿಗಳು, ಹೋಟೆಲ್ ಗಳು,ಗ್ಯಾರೇಜ್ ಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಕರಪತ್ರ ನೀಡುವುದರ ಮೂಲಕ 18 ವರ್ಷದ ಒಳಪಟ್ಟ ಮಕ್ಕಳನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ ವಿಷಯವನ್ನು ತಿಳಿಸಲಾಯಿತು.
ಮುಂದಿನ ದಿನಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ತಹಸಿಲ್ದಾರ್ ರವರು ತಿಳಿಸಿದರು.
ಈ ತಂಡವು ಹನೂರು ಪಟ್ಟಣದ ಪೊಲೀಸ್ ಸ್ಟೇಷನ್ ರಸ್ತೆ ಬಸ್ ನಿಲ್ದಾಣ ರಸ್ತೆ ಬಂಡಳ್ಳಿ ರಸ್ತೆ ಗಳಿಗೆ ತೆರಳಿ ಅಲ್ಲಿನ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಅರಿವು ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ತಂಡದಲ್ಲಿ ಕಾರ್ಮಿಕ ನಿರೀಕ್ಷಕರಾದ ಪ್ರಸಾದ್ ರವರು ಯೋಜನಾ ನಿರ್ದೇಶಕರಾದ ಮಹೇಶ್ ರವರು ಬಿಸಿಎಂ ಅಧಿಕಾರಿಗಳಾದ ಲಿಂಗರಾಜುರವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜನಾರ್ಧನ್ ರವರು ಕಾರ್ಮಿಕ ಇಲಾಖೆಯ ಸುನಿಲ್ ರವರು ಹಾಜರಿದ್ದರು.
ವರದಿ : ಚೇತನ್ ಕುಮಾರ್ ಎಲ್, ಹನೂರು ತಾಲೂಕು ಚಾಮರಾಜನಗರ ಜಿಲ್ಲೆ.