ಇಂಡಿಯಲ್ಲಿ 18 ಜನರಿಗೆ ಹುಚ್ಚು ನಾಯಿ ಕಡಿತ..!
ಇಂಡಿ : ಪಟ್ಟಣದ ವಿವಿಧ ಕಡೆಗೆ ಒಂದೇ ಹುಚ್ಚು ನಾಯಿ ೧೮ ಜನರಿಗೆ ಕಡಿದಿದೆ. ಟಿಪ್ಪು ಸುಲ್ತಾನ ವೃತ್ತದಲ್ಲಿ ೪ ಜನರಿಗೆ , ಸಿಂದಗಿ ರಸ್ತೆಯಲ್ಲಿ ೯ ಜನರಿಗೆ, ಅಗರಖೇಡ ರಸ್ತೆಯಲ್ಲಿ ೫ ಜನರಿಗೆ ಕಡೆದ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅಂಟಿರೇಬಿಸ್ ವ್ಯಾಕ್ಸಿನ್ ನೀಡಲಾಗಿದೆ. ಜೋತೆಗೆ ಟಿಟಿ ಚುಚ್ಚು ಮದ್ದು ನೀಡಲಾಗಿದೆ.
ಡಾ|| ರಾಜೇಶ ಕೋಳೆಕರ, ಡಾ|| ಪ್ರೀತಿ ಕೋಳೆಕರ, ಡಾ|| ಸಂತೋಷ ಪವಾರ,ಡಾ|| ರವಿ ಅಂಬೇವಾಡಿ, ಡಾ|| ವಿಪುಲ್ ಕೋಳೆಕರ ನಾಯಿ ಕಡಿತದ ಜನರಿಗೆ ಆರೈಕೆ ಮಾಡಿದರು.
ನಾಯಿಗೆ ಬಸ್ ನಿಲ್ದಾಣ ಹತ್ತಿರ ಹೊಡೆದು ಸಾಯಿಸಲಾಗಿದೆ. ಸಾರ್ವಜನಿಕರು ಭಯ ಪಡುವದಿಲ್ಲ ಎಂದು ದವಾಖಾನೆಯ ಮೂಲಗಳು ತಿಳಿಸಿವೆ.
ಇಂಡಿ: ತ್ತು ಬಿದ್ದ ಹುಚ್ಚುನಾಯಿ