ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಹಳೆಯ ಕಾಲದ ಶ್ರೀ ಮಲ್ಲಯ್ಯ ದೇವರ ಮಂದಿರದ ಜೀರ್ಣೋದ್ದಾರ ಕಾರ್ಯಕ್ಕೆ ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಗುರುವಾರದಂದು (ಸೆ. ೫ ರಂದು) ಚಾಲನೆ ನೀಡಿದರು.
ಅಹಿರಂಗದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಶಿರವಾಳದ ಪೂಜ್ಯ ಸೋಮಲಿಂಗ ಮಹಾರಾಜರು, ಸ್ವಾಮೀಜಿ ಸಾನಿಧ್ಯದಲ್ಲಿ ಬೆಳಿಗ್ಗೆ ಶ್ರೀ ಮಲ್ಲಯ್ಯ ದೇವರಿಗೆ ಪೂಜೆ, ಮಂಗಳಾರತಿ ನೆರವೇರಿಸಿದ ಬಳಿಕ ಬಂಥನಾಳ ಪೂಜ್ಯರ ಅಪ್ಪಣೆಯ ಮೇರೆಗೆ ಶಾಸ್ತೊçÃಕವಾಗಿ ಮಂತ್ರ ಘೋಷದೊಂದಿಗೆ ಹಳೆಯ ಕಾಲದ ಲಿಂಗವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿ ಆವರಣದಲ್ಲೆ ಇರುವ ಸುರಕ್ಷಿತ ನೂತನ ಕೋಣೆಗೆ ಸ್ಥಳಾಂತರಿಸಿ, ಮಂತ್ರ ಘೋಷಣೆಯೊಂದಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಯಿತು. ಬಳಿಕ ಗ್ರಾಮದ ಪ್ರಮುಖ ಗಣ್ಯರು, ದಾನಿಗಳು, ಈ ಸುಂದರ ಮಂದಿರಕ್ಕೆ ನೀಲ ನಕ್ಷೆ ತಯಾರಿಸಿದ ಸ್ಥಳಿಯ ಇಂಜನಿಯರ್ ಸಚಿನ್ ಕಟಕದೊಂಡ ಹಾಗೂ ಭಕ್ತರು ಒಂದುಗೂಡಿ ದೇವಸ್ಥಾನದ ಆವರಣದಲ್ಲೆ ಸಭೆ ನಡೆಸಿ ದೇವಸ್ಥಾನ ನಿರ್ಮಾಣದ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಗ್ರಾಮದಲ್ಲಿ ಹಲವು ದೇವಸ್ಥಾನ ಜೀಣೋದ್ಧಾರಗೈಯಲಾಗಿದೆ. ಗ್ರಾಮದ ಇತಿಹಾಸ ಸಾರುವ, ಪುರಾಣ ಪ್ರಸಿದ್ದ ದೇವಾಲಯ ಜೀರ್ಣಾವಸ್ಥೆಯಲ್ಲಿದೆ. ಈ ದೇವಸ್ಥಾನ ಜೀಣೋದ್ಧಾರಗೈಯ್ಯಬೇಕು ಎಂಬುದು ಭಕ್ತರ ಬಹುದಿನಗಳ ಹೆಬ್ಬಯಕೆ ಆಗಿತ್ತು. ಈಗ ಕಾಲ ಕೂಡಿಬಂದಿದೆ. ದೇವಸ್ಥಾನ ಭದ್ರವಾದ ಗರ್ಭಗುಡಿ, ಸುಂದರ ಆಲಯ ನಿರ್ಮಾಣಕ್ಕೆ ಭಕ್ತರು ಸ್ವಯಂಪ್ರೇರಿತರಾಗಿ ದೇಣ ಗೆ ಸಲ್ಲಿಸಲು ಮುಂದೆ ಬರುತ್ತಿದ್ದಾರೆ. ಈ ಮೂಲಕ ನಮ್ಮೂರಲ್ಲಿ ಸುಂದರವಾದ ಮಲ್ಲಯ್ಯ ಮಂದಿರ ನಿರ್ಮಾಣ ಆಗಬೇಕು ಎಂದು ನುಡಿದರು.
ಈ ಹಿಂದೆ ದೇವಸ್ಥಾನದ ಆವರಣದಲ್ಲಿ ಆಡಿ ಬೆಳೆದ ಮಕ್ಕಳೆ ಇಂದಿನ ಗ್ರಾಮದ ಹಿರಿಯರು ಒಂದುಗೂಡಿ, ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಏಕೋ ಭಾವನೆಯಿಂದ ದೇವಾಲಯದ ಆವರಣದಲ್ಲೆ ಚಿಂತನ – ಮಂಥನ ನಡೆಸಿ ಅತ್ಯಂತ ಉತ್ಸಾಹದಿಂದ ಬಂಥನಾಳ ಪೂಜ್ಯರ ಸಾನಿಧ್ಯದಲ್ಲಿ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವದು ಗ್ರಾಮದ ಹಲವು ಜನರಲ್ಲಿ, ಮಹಿಳೆಯರಲ್ಲಿ ಸಂತಸ ಮೂಡಿಸಿದೆ. ದೇವಸ್ಥಾನ ನಿರ್ಮಾಣದ ಆರಂಭದಿಂದ ಕೊನೆಯ ಹಂತದ ವರೆಗೆ ಇದೇ ಉತ್ಸಾಹ ತೋರಬೇಕು ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ವೇದಮೂರ್ತಿ ನಾಗರಾಜ ಹಿರೇಮಠ, ಮುರಗಯ್ಯ ಹಿರೇಮಠ, ಸುರೇಶ ಹಿರೇಮಠ ಪೂಜಾ ಕೈಂಕರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಮಲ್ಲಯ್ಯ ಮಠಪತಿ, ನಿವೃತ್ತ ಮುಖ್ಯೋಪಾಧ್ಯಾಯ ಡಿ.ಎಸ್. ಪಾಟೀಲ, ವ್ಹಿ.ಎಂ. ಕರಾಳೆ, ಊರಿನ ಗಣ್ಯರಾದ ಎಂ.ಎಸ್. ಮುಜಗೊಂಡ, ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಶೋಕಗೌಡ ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಲಕಣ್ಣಾ ಗುಬ್ಯಾಡ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಠ್ಠಲ ಬಾಬುಳಗಿ, ಮಾಜಿ ಸದಸ್ಯ ಗೌಡಪ್ಪ ಹೊಸಮನಿ, ಯುವ ದುರೀಣ ರಮೇಶ ದಾಯಗೋಡೆ, ಯಶವಂತ ಬಿರಾದಾರ, ಶಿವನಿಂಗಪ್ಪ ಸಿದ್ರಾಮಶೆಟ್ಟಿ, ಬಸವರಾಜ ಕರಾಳೆ, ದೇವಸ್ಥಾನ ಸೇವಾ ಸಮಿತಿಯ ರಾಜಶೇಖರ ಸಿದ್ರಾಮಶೆಟ್ಟಿ, ಡಾ. ಸಂತೋಷ ಬಡಿಗೇರ, ಗ್ರಾಮದ ಗಣ್ಯರಾದ ಈರಣ್ಣ ಅಹಿರಸಂಗ, ಈರಣ್ಣ ಬಿರಾದಾರ, ರಾಜಶೇಖರ ಕಾರಾಜಿಣಗಿ, ಸಿದ್ರಾಮ ಮೈದರಗಿ, ಬಸವರಾಜ ಹಾದಿಮನಿ, ಶ್ರೀಧರ ಲಾಳಸೇರಿ, ಸುಭಾಸ್ ಲಾಳಸೇರಿ, ಹಣಮಂತ ಪೋಲಾಶಿ, ಮಹಾದೇವ ಕಾಸಾರ, ಯುವಕರಾದ ಮಲ್ಲೇಶಿ ಕರಾಳೆ, ಶಂಕರಲಿಂಗ ಬಿರಾದಾರ, ಬಾಬು ಬಿರಾದಾರ, ಚಂದ್ರಕಾಂತ ಬಾಬುಳಗಿ, ಸಂತೋಷ ಪೋಲಾಸಿ, ಶ್ರೀಶೈಲ ಬಾಬುಳಗಿ, ರಾಜು ನದಾಫ್, ಶ್ರೀಶೈಲ ಲಾಳಸೇರಿ, ಈರಣ್ಣ ಹೊಟಗಿ ಹಾಗೂ ದೇವಸ್ಥಾನ ಅರ್ಚಕರು ಉಪಸ್ಥಿತರಿದ್ದರು.