VOJ ನ್ಯೂಸ್ ಡೆಸ್ಕ್ : ಕೆನಡಾದ ಬ್ರಿಟಿಷ್ ಕೊಲಂಬಿಯಾದ ನದಿಯಲ್ಲಿ ಮೀನುಗಾರರೊಬ್ಬರು ಬರೊಬ್ಬರಿ 10.5 ಅಡಿ ಉದ್ದದ ಸ್ಟರ್ಜನ್ ಮೀನನ್ನು ಹಿಡಿದಿದ್ದಾರೆ. ಇದನ್ನು ‘ಜೀವಂತ ಡೈನೋಸಾರ್’ ಎಂದೂ ಕರೆಯುತ್ತಾರೆ. 226 ಕೆಜಿ ಗಿಂತಲೂ ಹೆಚ್ಚು ತೂಕದ ಈ ದೈತ್ಯ ಮೀನನ್ನು ಸೆರೆ ಹಿಡಿದ ವೈವ್ಸ್ ಬಿಸ್ಸನ್ ಬಳಿಕ ಮೀನನ್ನು ನದಿಗೆ ಬಿಟ್ಟಿದ್ದಾರೆ. ಈ ಮೀನು 100 ವರ್ಷಕ್ಕಿಂತ ಹೆಚ್ಚು ಪ್ರಾಯದ ಮೀನು ಎಂದು ಬಿಸ್ಸನ್ ಹೇಳಿದ್ದಾರೆ.