ಭೀಮಾತೀರ: ಅಕ್ರಮ ಮದ್ಯ ಸಾಗಾಟ ಆರೋಪಿಗೆ 1 ವರ್ಷ ಜೈಲು ಹಾಗೂ ₹ 10 ದಂಡ..!
ಇಂಡಿ : ಅಕ್ರಮವಾಗಿ ಬೈಕ್ನಲ್ಲಿ ಮದ್ಯ ಸಾಗಾಟ ಸಾಬೀತು ಹಿನ್ನೆಲೆ ಆರೋಪಿಗೆ ಒಂದು ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ವಿಜಯಪುರ ಜಿಲ್ಲೆಯ ಇಂಡಿ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಖೋಬಣ್ಣ ಮಹಾದೇವ ಕೋಳಿ
ಶಿಕ್ಷೆಗೊಳಗಾದವರು. ಇನ್ನು 24-08-2019 ರಂದು ಇಂಡಿ ತಾಲ್ಲೂಕಿನ ಶಿರನಾಳ ಗ್ರಾಮದ ಬಾಂದಾರ ಬಳಿ ಅಕ್ರಮವಾಗಿ ಮದ್ಯ ಸಾಗಾಟ ವೇಳೆ ಅಬಕಾರಿ ಪೊಲೀಸ ಶರಣಗೌಡ ಬಿರಾದಾರ ನೇತೃತ್ವದ ತಂಡ ದಾಳಿಗೈದು ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು. ಇನ್ನೂ ವಾದ ವಿವಾದಗಳನ್ನು ಆಲಿಸಿದ ಜೆಎಂಎಫ್ಸಿ ನ್ಯಾಯಾಧೀಶರಾದ ಈಶ್ವರ ಎಸ್ಎಂ ಅವರು ಆರೋಪಿಗೆ ದಂಡ ಹಾಗೂ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಇಬ್ರಾಹಿಂ ಗಚ್ಚಿಮಹಲ್ ವಾದ ಮಂಡಿಸಿದರು.