ಆನೆ ತುಳಿತದಿಂದ ಸಾವನ್ನಪ್ಪಿದ ಮನೆಗೆ ಭೇಟಿ: 5 ಲಕ್ಷದ ಪರಿಹಾರದ ಚೆಕ್ ನೀಡಿದ ಶಾಸಕ ಎಂ ಆರ್ ಮಂಜುನಾಥ್
ಹನೂರು: ತಾಲೂಕು ತೋಕೆರೆ ಗ್ರಾಮದ ನಿವಾಸಿಯು ಕಾಡಿಗೆ ಮೇಕೆ ಮೀಸಲು ಹೋಗಿದ್ದ ಚಿಕ್ಕ ಮಾದಯ್ಯ ಗುರುವಾರ ಕಾಡಾನೆ ದಾಳಿಗೆ ಮೃತಪಟ್ಟಿದ್ದರು.
ಶಾಸಕರಾದ ಎಂ ಆರ್ ಮಂಜುನಾಥ್ ರವರು 2 ದಿನದ ಹಿಂದೆ ತೋಕೆರೆ ಗ್ರಾಮದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸಾವನಪ್ಪಿದ ಚಿಕ್ಕಮಾದಯ್ಯ ರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದಿಂದ 5. ಲಕ್ಷ ರೂಪಾಯಿ ಪರಿಹಾರ ನೀಡುವುದರ ಜೊತೆಗೆ ವ್ಯಯುಕ್ತಿಕ ವಾಗಿಯು 10,000 ರೂ ಅನ್ನು ಪರಿಹಾರವನ್ನು ಮೃತಪಟ್ಟ ಚಿಕ್ಕಮಾದಯ್ಯ ರವರ ಧರ್ಮಪತ್ನಿ ಮಾದಮ್ಮ ರವರಿಗೆ ನೀಡಿದ್ದಾರೆ. ಆ ಸಮಯದಲ್ಲೇ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಫೋನ್ ಮಾಡಿ ಇಲ್ಲಿನ ಜನರ ತೊಂದರೆ ಬಗ್ಗೆ ತಿಳಿಹೇಳಿದ್ದಾರೆ. ಅರಣ್ಯ ಸಚಿವರು ಮೃತನ ಪತ್ನಿಯಾದ ಮಾದಮ್ಮ ಜೊತೆ ಮಾತನಾಡಿ ಸಾಂತ್ವನವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಶ್ರೀಧರ್ ಹಾಗೂ ಸುಂದರ್ ಜೆಡಿಎಸ್ ಮುಖಂಡರುಗಳು ಹಾಜರಿದ್ದರು.
ವರದಿ:ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.