ರಮೇಶಗೌಡ ಚಂದ್ರಕಾಂತ ಪಾಟೀಲನಿಧನ
ವಿಜಯಪುರ 5. ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದ ರಮೇಶಗೌಡ ಚಂದ್ರಕಾಂತ ಪಾಟೀಲ (53) ಅನಾರೋಗ್ಯದಿಂದ ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಮುತ್ತಗಿ ಗೌರಿಶಂಕರ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರಾಗಿ, ಕೂಡಗಿಯಲ್ಲಿ ಅಥಣಿ ವಿಭಾಗದ ಶ್ರೀ ಮುರುಘರಾಜೇಂದ್ರ ಎಜುಕೇಶನ್ ಸೊಸೈಟಿ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ತಾಯಿ, ಪತ್ನಿ, ಮೂವರು ಪುತ್ರಿಯರನ್ನು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಇಂದು ಮಲಘಾಣ ಗ್ರಾಮದಲ್ಲಿ ಇಂದು ಸಂಜೆ ನೆರವೇರಿತು.


















