ಬೆಂಗಳೂರು: ಒಂದೇ ಇ ಮೇಲ್ ಐಡಿಯಿಂದ ಪ್ರತಿಷ್ಠಿತ 9 ಶಾಲೆಗಳಿಗೆ ಬಾಂಬ್ ಇಟ್ಟಿರುವದಾಗಿ ಅನಾಮಧೇಯ
ವ್ಯಕ್ತಿ ಶಾಲೆಯ ಮುಖ್ಯಸ್ಥರ ಮೇಲ್ ಗೆ ಬಾಂಬ್ ಇಟ್ಟಿರುವದಾಗಿ ಮೆಸೇಜ್ ಮಾಡಿ ಆತಂಕ ಸೃಷ್ಟಿಸಿದ್ದಾನೆ.
ಇ ಮೇಲ್ ಮೂಲಕ ಶಾಲೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿಯನ್ನು ಮೇಲ್ ನಲ್ಲಿ ಮಾಹಿತಿ ನೀಡಲಾಗಿದೆ. ಇಂದು ಬೆಳಿಗ್ಗೆ 10.45 ಕ್ಕೆ ಇ ಮೇಲ್ ಮೂಲಕ ಬೆದರಿಕೆಯನ್ನು ಹಾಕಲಾಗಿದೆ. ನಂತರ 11.09, 11. 36 ಕ್ಕೆ ದುಷ್ಕರ್ಮಿ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ವರ್ತೂರು ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಗೋವಿಂದಪುರಶಾಲೆ, ಮಾರತ್ತಳ್ಳಿಯ ನ್ಯೂ ಅಕಾಡೆಮಿ ಸ್ಕೂಲ್, ಸರ್ಜಾಪುರದ ಕುನ್ಸ ಕ್ಯಾಪ್ಸ್ ಶಾಲೆ, ಸೇಂಟ್ ವಿನ್ಸೆನ್ಸ್ ಸ್ಕೂಲ್, ಇಂಡಿಯನ್ ಪಬ್ಲಿಕ್ ಸ್ಕೂಲ್ಗಳಿಗೆ ಬಾಂಬ್ ಬೆದರಿಕೆ ಒಡ್ಡಲಾಗಿದೆ. ಇನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಬಾಂಬ್ ನಿಷ್ಕೃೀಯ ದಳದ ಸಿಬ್ಬಂದಿಗಳು ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಶಾಲಾ ಆಡಳಿತ ಮಂಡಳಿಗಳಿಂದ ವಿದ್ಯಾರ್ಥಿಗಳ ಪೋಷಕರಿಗೆ ಕರೆ ಮಾಡಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಮನವಿ ಮಾಡಲಾಗಿದೆ. ಇತ್ತ ಪೋಷಕರು ಆತಂಕದಲ್ಲೇ ಮಕ್ಕಳನ್ನು ಶಾಲೆಗಳಿಂದ ಮನೆಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.