E-PAPER
25 Nov 2026, 03:35:01 AM|
Gold₹12215/gGold24K ₹12,215/g - 22K ₹11,197/gTap for full detailsWEATHER23°AQI 92WeatherBelagavi · 23° · Mainly clearTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಿಎಲ್‌ಒ ಮೇಲ್ವಿಚಾರಕ ಹುದ್ದೆಯಿಂದ ಬಿಡುಗಡೆಗೊಳಿಸಲು ಸಿಆರ್‌ಪಿಗಳ ಮನವಿ

ಬಿಎಲ್‌ಒ ಮೇಲ್ವಿಚಾರಕ ಹುದ್ದೆಯಿಂದ ಬಿಡುಗಡೆಗೊಳಿಸಲು ಸಿಆರ್‌ಪಿಗಳ ಮನವಿ

​
ಮುದ್ದೇಬಿಹಾಳ: ಬಿಎಲ್‌ಒ ಮೇಲ್ವಿಚಾರಕರ (BLO Supervisor) ಹುದ್ದೆಯನ್ನು ಗ್ರೇಡ್‌-2 ಅಧಿಕಾರಿಗಳಿಗೆ ನೀಡುವ ಬದಲು, ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಸಿಆರ್‌ಪಿ (CRP) ಗಳಿಗೆ ವಹಿಸಿರುವುದನ್ನು ಖಂಡಿಸಿ ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲ್ಲೂಕಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು (ಸಿಆರ್‌ಪಿ)  ತಹಶೀಲ್ದಾರ್ ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸಿದರು.
​ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ತೆರಳಿ, ತಮ್ಮನ್ನು ಈ ಕೂಡಲೇ ಬಿಎಲ್‌ಒ ಮೇಲ್ವಿಚಾರಕ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಲಾಯಿತು.
​ಶಿಕ್ಷಣದ ಗುಣಮಟ್ಟಕ್ಕೆ ಅಡ್ಡಿ: ಸಿಆರ್‌ಪಿಗಳ ಅಳಲು
​ಮನವಿ ಸಲ್ಲಿಸಿದ ಸಿಆರ್‌ಪಿಗಳು ತಮ್ಮ ಅಸಮಾಧಾನವನ್ನು ಈ ಕೆಳಗಿನಂತೆ ವ್ಯಕ್ತಪಡಿಸಿದರು:
​ಹೆಚ್ಚುವರಿ ಕೆಲಸದ ಒತ್ತಡ: ಈಗಾಗಲೇ ಇಲಾಖೆಯಲ್ಲಿ SATS, ಯು-ಡೈಸ್ ಪ್ಲಸ್, ಕ್ರೀಡಾಕೂಟ, ಪ್ರತಿಭಾ ಕಾರಂಜಿ, ಬಿಸಿಯೂಟ ಯೋಜನೆ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಂತಹ ಹತ್ತಾರು ಜವಾಬ್ದಾರಿಗಳಿವೆ. ಇದರ ಜೊತೆಗೆ ಚುನಾವಣಾ ಕೆಲಸಗಳನ್ನು ನೀಡಿರುವುದು ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ.
​ಆರೋಗ್ಯದ ಮೇಲೆ ಪರಿಣಾಮ: ವರ್ಷವಿಡೀ ಎರಡೆರಡು ಇಲಾಖೆಗಳ ಕೆಲಸ ನಿರ್ವಹಿಸುವುದರಿಂದ ಹಲವರಿಗೆ ಬಿಪಿ, ಶುಗರ್‌ನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.
​ನಿಯಮದ ಉಲ್ಲಂಘನೆ: ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರೇಡ್‌-2 ಹುದ್ದೆಯಲ್ಲಿರುವವರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬೇಕು. ಆದರೆ, ಶಿಕ್ಷಕರ ಸಮಾನ ವೃಂದದ ಸಿಆರ್‌ಪಿಗಳನ್ನು ನೇಮಿಸಿರುವುದು ಸರಿಯಲ್ಲ.
​"ನಮಗೆ ವಹಿಸಿರುವ ಈ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮನ್ನು ಈ ಹುದ್ದೆಯಿಂದ ಬಿಡುಗಡೆಗೊಳಿಸಿ ನೆಮ್ಮದಿಯಿಂದ ಇಲಾಖೆಯ ಕೆಲಸ ಮಾಡಲು ಅನುವು ಮಾಡಿಕೊಡಬೇಕು."
- ಪ್ರತಿಭಬಿಎಲ್‌ಒ ಮೇಲ್ವಿಚಾರಕ ಹುದ್ದೆಯಿಂದ ಬಿಡುಗಡೆಗೊಳಿಸಲು ಸಿಆರ್‌ಪಿಗಳ ಮನವಿ
​ಮುದ್ದೇಬಿಹಾಳ: ಬಿಎಲ್‌ಒ ಮೇಲ್ವಿಚಾರಕರ (BLO Supervisor) ಹುದ್ದೆಯನ್ನು ಗ್ರೇಡ್‌-2 ಅಧಿಕಾರಿಗಳಿಗೆ ನೀಡುವ ಬದಲು, ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಸಿಆರ್‌ಪಿ (CRP) ಗಳಿಗೆ ವಹಿಸಿರುವುದನ್ನು ಖಂಡಿಸಿ ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲ್ಲೂಕಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು (ಸಿಆರ್‌ಪಿ) ಗುರುವಾರ ತಹಶೀಲ್ದಾರ್ ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸಿದರು.
​ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ತೆರಳಿ, ತಮ್ಮನ್ನು ಈ ಕೂಡಲೇ ಬಿಎಲ್‌ಒ ಮೇಲ್ವಿಚಾರಕ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಲಾಯಿತು.
​ಶಿಕ್ಷಣದ ಗುಣಮಟ್ಟಕ್ಕೆ ಅಡ್ಡಿ: ಸಿಆರ್‌ಪಿಗಳ ಅಳಲು
​ಮನವಿ ಸಲ್ಲಿಸಿದ ಸಿಆರ್‌ಪಿಗಳು ತಮ್ಮ ಅಸಮಾಧಾನವನ್ನು
ಈ ಕೆಳಗಿನಂತೆ ವ್ಯಕ್ತಪಡಿಸಿದರು:
​ಹೆಚ್ಚುವರಿ ಕೆಲಸದ ಒತ್ತಡ: ಈಗಾಗಲೇ ಇಲಾಖೆಯಲ್ಲಿ SATS, ಯು-ಡೈಸ್ ಪ್ಲಸ್, ಕ್ರೀಡಾಕೂಟ, ಪ್ರತಿಭಾ ಕಾರಂಜಿ, ಬಿಸಿಯೂಟ ಯೋಜನೆ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಂತಹ ಹತ್ತಾರು ಜವಾಬ್ದಾರಿಗಳಿವೆ. ಇದರ ಜೊತೆಗೆ ಚುನಾವಣಾ ಕೆಲಸಗಳನ್ನು ನೀಡಿರುವುದು ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ.
​ಆರೋಗ್ಯದ ಮೇಲೆ ಪರಿಣಾಮ: ವರ್ಷವಿಡೀ ಎರಡೆರಡು ಇಲಾಖೆಗಳ ಕೆಲಸ ನಿರ್ವಹಿಸುವುದರಿಂದ ಹಲವರಿಗೆ ಬಿಪಿ, ಶುಗರ್‌ನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.
​ನಿಯಮದ ಉಲ್ಲಂಘನೆ: ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರೇಡ್‌-2 ಹುದ್ದೆಯಲ್ಲಿರುವವರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬೇಕು. ಆದರೆ, ಶಿಕ್ಷಕರ ಸಮಾನ ವೃಂದದ ಸಿಆರ್‌ಪಿಗಳನ್ನು ನೇಮಿಸಿರುವುದು ಸರಿಯಲ್ಲ.
​"ನಮಗೆ ವಹಿಸಿರುವ ಈ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮನ್ನು ಈ ಹುದ್ದೆಯಿಂದ ಬಿಡುಗಡೆಗೊಳಿಸಿ ನೆಮ್ಮದಿಯಿಂದ ಇಲಾಖೆಯ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದರು.
​ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ತುರುಡಗಿ, ಶಿಕ್ಷಕರ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪಿ.ಎ.ಭೋವಿ, ಗಣೇಶ ಬಶೆಟ್ಟಿ, ರಾಜು ವಿಜಾಪುರ, ಸಂಗಪ್ಪ ಪಾಲ್ಕೆ, ಅಮರೇಶ ಕಸಬೇಗೌಡರ, ಬಿ.ಡಿ.ಕಪನೂರ, ಗುಂಡು ಚೌವ್ಹಾಣ, ಎಂ.ಎಸ್.ಮಾಕೊಂಡ, ಎಲ್.ಎಚ್.ರಾಠೋಡ, ಎಸ್.ಎಸ್.ಬಾವಿಕಟ್ಟಿ, ಎನ್.ಬಿ.ಬಿರಾದಾರ ಸೇರಿದಂತೆ ವಿವಿಧ ಕ್ಲಸ್ಟರ್‌ಗಳ ಸಮೂಹ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಉಪಸ್ಥಿತರಿದ್ದರು.
​

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ