E-PAPER
25 Nov 2026, 12:56:38 AM|
Gold₹12519/gGold24K ₹12,519/g - 22K ₹11,465/gTap for full detailsWEATHER25°AQI 99WeatherBelagavi · 25° · Mainly clearTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಂಜುಟಗಿ ಗ್ರಾಮ ಪಂಚಾಯತ್ ಬೀಗ ಜಡಿದು ಪ್ರತಿಭಟನೆ..! ಏಕೆ ಗೊತ್ತಾ..?

ಅಂಜುಟಗಿ ಗ್ರಾಮ ಪಂಚಾಯತ್ ಬೀಗ ಜಡಿದು ಪ್ರತಿಭಟನೆ..! ಏಕೆ ಗೊತ್ತಾ..?

ಇಂಡಿ : ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಗೆ ಗ್ರಾಮ‌ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಬಾರದ ಹಿನ್ನೆಲೆಯಲ್ಲಿ ಗ್ರಾಮ‌ ಪಂಚಾಯತ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ತಾಲ್ಲೂಕಿನಲ್ಲಿ ನಡೆದಿದೆ.

ಇಂದು ಇಡೀ ದೇಶಾದಾದ್ಯಂತ ಸರಕಾರದ ಆದೇಶದಂತೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಾರೆ. ಆದರೆ
ತಾಲ್ಲೂಕಿನ ಅಂಜುಟಗಿ ಗ್ರಾಮ ಪಂಚಾಯತಯಲ್ಲಿ ಜಯಂತಿ ಆಚರಣೆ ‌ಮಾಡಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮಕ್ಕೆ ಬಾರದೆ ನಿರ್ಲಕ್ಷ್ಯ ತೋರಿ ಅಪಮಾನಗೊಳಿಸಿದ್ದಾರೆಂದು ಗ್ರಾಮಸ್ಥರು ಹಾಗೂ ಸಂಘಟಕರು ಪಂಚಾಯತ್ ಬೀಗ ಜಡಿದು ಪ್ರತಿಭಟನೆ ಮಾಡಿದ್ದಾರೆ.

ಡಾ. ಬಿ. ಆರ್. ಅಂಬೇಡ್ಕರ್... ಭಾರತದ ಹೆಮ್ಮೆಯ ಪುತ್ರ... ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಪ್ರಮುಖರು. ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರು ಸಾಮಾಜಿಕವಾಗಿ ಮೂಡಿಸಿದ ಸಂಚಲನಗಳು ಅಷ್ಟು ಹಿರಿದಾಗಿದ್ದವು. ಇವರ ತತ್ವ ಆದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುವಂತಿದೆ. ಅದೂ ಅಲ್ಲದೆ, ಪ್ರತಿಯೊಬ್ಬ ಭಾರತೀಯರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್. ಅಂಬೇಡ್ಕರ್ ಅವರ ಸಾಧನೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಲು ಏಪ್ರಿಲ್ 14ರಂದು ಪ್ರತಿವರ್ಷ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ. ಇಂತಹ ಮಹತ್ವದ ದಿನದಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯತೋರಿ ಜಯಂತಿಗೆ ಬಾರದೆ ಇರುವುದು ಅತ್ಯಂತ ನೋವು ತಂದಿದೆ ಎಂದು ಡಾ. ಬಿ ಆರ್ ಅಂಬೇಡ್ಕರ್ ಅಭಿಮಾನಿಗಳು ಅಳಲು ತೊಡಗಿಕೊಂಡು.

ಇನ್ನೂ ಪ್ರತಿಭಟನೆ ಸುದ್ದಿ ತಿಳಿದ ತಕ್ಷಣ ತಹಶಿಲ್ದಾರ ಮಂಜುಳಾ ನಾಯಿಕ ಗ್ರಾಮ ಪಂಚಾಯತಗೆ ಧಾವಿಸಿ ಸಮಸ್ಯೆ ಬಗ್ಗೆ ಆಲಿಸಿದರು. ಅಲ್ಲಿರುವ ಸ್ಥಳೀಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿಗೆ ಹಾಜರಾಗದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪ ಮಾಡಿ, ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪ್ರತಿಭಟನಕಾರರಿಗೆ ಸ್ಪಂದಿಸಿದ ತಹಶಿಲ್ದಾರ ಅವರು ಪಿಡಿಒ ಅವರಿಗೆ ನೋಟಿಸ್ ಕೊಡಲಾಗುವುದು ಎಂದು ಮನವೋಲಿಸಿ ಅವರನ್ನು ಪ್ರತಿಭಟನೆಯಿಂದ ಹಿಂದೆ ಸರಿಸಿದರು.

ಈ ಸಂದರ್ಭದಲ್ಲಿ ಯಜಮಾನ ಶಿವಶರಣ, ಅವದುತ ದೊಳ್ಳೆನವರ, ಮರೆಪ್ಪ ದೊಳ್ಳೆನವರ, ಮಾದೇಶ್ ಜ್ಯಾಬೇನವರ, ಹಣಮಂತ ಅಂಜುಟಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.

ಪಿಡಿಒ ಅವರಿಗೆ, ಅಂಜುಟಗಿ ಮತ್ತು ನಿಂಬಾಳ ಎರಡು ಗ್ರಾಮ‌ ಪಂಚಾಯತ್ ಜವಾಬ್ದಾರಿ ಹೊಂದಿರುವುದರಿಂದ, ಒಂದು ಕಡೆ ಮುಗಿಸಿಕೊಂಡು ಇನ್ನೊಂದು ಕಡೆ ಬರಬೇಕಾದರೆ ತಡವಾಗಿದೆ. ಹಾಗಾಗಿ ಈ ಸಮಸ್ಯೆ ಉಂಟಾಗಿದೆ. ಅದಲ್ಲದೇ ಸ್ಥಳಕ್ಕೆ ತಹಶಿಲ್ದಾರ ಮಂಜುಳಾ ನಾಯಿಕ ಬೇಟಿ ನೀಡಿ, ಸಮಸ್ಯೆ ಬಗಿಹರಿಸಿದ್ದಾರೆ.

ನೀಲಗಂಗಾ ಎಸ್ ಬಿ
ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ