E-PAPER
25 Nov 2026, 02:31:26 AM|
Gold₹12519/gGold24K ₹12,519/g - 22K ₹11,465/gTap for full detailsWEATHER24°AQI 95WeatherBelagavi · 24° · Clear skyTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಇಂಡಿ : ಮುಗ್ಧ ರೈತರ ಸಂಘದಲ್ಲಿಯೂ ನೀಚ ರಾಜಕಾರಣ : ಆನಂದ ಪವಾರ

ಇಂಗಳಗಿ : ಮುಗ್ಧ ರೈತರ ಸಂಘದಲ್ಲಿಯೂ ನೀಚ ರಾಜಕಾರಣ : ಆನಂದ ಪವಾರ

 

ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಇಂಗಳಗಿ ಚುನಾವಣೆ ಯಾದಿಯಲ್ಲಿ ಸಾಕಷ್ಟು ಅಕ್ರಮವೆಸಗಲಾಗಿದೆ ಎಂದು ಸಂಘದ ಅ ವರ್ಗದ ಸದಸ್ಯ ಆನಂದ ಪವಾರ್ ಸೇರಿದಂತೆ ಹಲವರು ಆರೋಪಿಸಿದ್ದಾರೆ.

ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮ ಶೇರುದಾರರ ಪಟ್ಟಿಯಲ್ಲಿ ಅಪೂರ್ಣ ಶೇರ್ ಹೊಂದಿದ ಸದಸ್ಯರ ಹೆಸರು ಸಹ ಇವೆ. ಅಲ್ಲದೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮೂರಕ್ಕಿಂತ ಹೆಚ್ಚು ಸಹಿ ಮಾಡಿದ್ದರೂ ಸಹ ಅಂತಹವರ ಹೆಸರುಗಳನ್ನು ಕೈ ಬಿಡಲಾಗಿದೆ. ಅಂತಿಮ ಯಾದಿಯಲ್ಲಿನ ಸದಸ್ಯತ್ವ ಸಂಖ್ಯೆ ಹಾಗೂ ಸಂಘದ ಗಣಕಯಂತ್ರದಲ್ಲಿನ ಸದಸ್ಯತ್ವ ಸಂಖ್ಯೆಗಳನ್ನು ಪರಿಶೀಲಿಸಿದಾಗ ಎರಡೂ ಸಹ ಬೇರೆ-ಬೇರೆ ಇವೆ. ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರ ಕುಮ್ಮಕ್ಕಿನಿಂದ ಸಂಘದ ಮುರ್ಕಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ವಾಘಮೋರೆ ದೊಡ್ಡ ಪ್ರಮಾಣದ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು.

 

ಚುನಾವಣೆ ಪ್ರಕ್ರಿಯೆ ಫೆ. ೧೫ ರಿಂದ ಆರಂಭವಾಗಿದ್ದು ಅದಕ್ಕಿಂತಲೂ ಒಂದು ದಿನ ಮುಂಚೆಯೇ ನೋಟಿಸ್ ಭೋರ್ಡಿಗೆ ಅರ್ಹ ಮತದಾರರ ಯಾದಿ ಹಾಗೂ ಚುನಾವಣೆ ಮಾಹಿತಿ ಅಚಿಟಿಸಬೇಕಿತ್ತು. ಆದರೆ ಅಂದು ನೋಟಿಸ್ ಬೋರ್ಡಿಗೆ ಹಚ್ಚದ ಕಾರಣ ಸಾರ್ವಜನಿಕರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಫೆ. ೧೫ ರಂದು ಕೇಳಿದಾಗ ಅಂದು ಬೆಳಿಗ್ಗೆ ನೋಟಿಸ್ ಬೋರ್ಡಿಗೆ ಮಾಹಿತಿ ಅಂಟಿಸಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದ್ದು ಬಲಾಢ್ಯರೇ ಮತ್ತೆ, ಮತ್ತೆ ಅಧಿಕಾರ ಹಿಡಿಯುಂತಾಗಿದೆ.

 

ಈ ಕುರಿತು ಸಹಾಯಕ ಉಪನಿಬಂಧಕರ ಕಾರ್ಯಾಲಯಕ್ಕೆ ಹಾಗೂ ಜಿಲ್ಲಾ ಸಹಾಯಕ ಉಪನಿಬಂಧಕರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು ಸಹ ಯಾವೊಬ್ಬ ಅಧಿಕಾರಿಗಳು ತನಿಖೆಯಾಗಲಿ, ಅಥವಾ ಸ್ಥಳಕ್ಕೆ ಬಂದು ಚೌಕಾಸಿ ಮಾಡುತ್ತಿಲ್ಲ, ಇದರಿಂದ ನೇರವಾಗಿ ಆಡಳಿತ ನಡೆಸುವವರು ಲಂಚದ ಬಲೆಯಲ್ಲಿ ಬಿದ್ದಿದ್ದಾರೆಂಬುದು ತಿಳಿಯುತ್ತದೆ. ಮುಗ್ಧ ರೈತರ ಸಂಘದಲ್ಲಿಯೂ ನೀಚ ರಾಜಕಾರಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಇದರ ಹಿಂದೆ ದೊಡ್ಡ-ದೊಡ್ಡ ರಾಜಕಾರಣಿಗಳ ಕೈವಾಡವೂ ಇದೆ ಎಂದು ಆರೋಪಿಸಿದರು.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ಯಾದಿಯನ್ನು ತಯಾರು ಮಾಡಿ ಗ್ರಾಮದ ಜನತೆಗೆ ಅನುಕೂಲ ಮಾಡಿಕೊಡಬೇಕು, ಇಲ್ಲವಾದರೆ ಸಾರ್ವಜನಿಕರೆಲ್ಲರೂ ಸೇರಿ ಉಗ್ರ ಹೋರಾಟಕ್ಕೆ ಅಣ ಯಾಗುತ್ತೇವೆ ಅದಕ್ಕೆ ನೇರವಾಗಿ ತಾಲೂಕಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

[video width="1920" height="1080" mp4="https://voiceofjanata.in/wp-content/uploads/2025/02/video_20250218_190055_edit.mp4" autoplay="true"][/video]

ಈ ಸಂದರ್ಭದಲ್ಲಿ ಸತೀಸ ಸೀತಿಮನಿ, ಯಲ್ಲಪ್ಪ ಪೂಜಾರಿ, ಲೋಕಸಿಂಗ್ ರಾಠೋಡ, ಜಂಗಲುಗೌಡ ಬಿರಾದಾರ, ಮಾಧವರಾವ್ ಪವಾರ ಸತೀಶ ಪವಾರ ಉಪಸ್ಥಿತರಿದ್ದರು.

ಇಂಡಿ: ಪತ್ರಿಕಾಗೋಷ್ಠಿಯಲ್ಲಿ ಆನಂದ ಪವಾರ ಮಾತನಾಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ