E-PAPER
25 Nov 2026, 04:09:45 AM|
Gold₹12519/gGold24K ₹12,519/g - 22K ₹11,465/gTap for full detailsWEATHER23°AQI 92WeatherBelagavi · 23° · Mainly clearTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಾಗರಬೆಟ್ಟದ ಎಕ್ಸ್‌ಪರ್ಟ್ ಸಂಸ್ಥೆಯಲ್ಲಿ ಎಕ್ಸ್‌ಪರ್ಟ್ ಉತ್ಸವ': ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

ನಾಗರಬೆಟ್ಟದ ಎಕ್ಸ್‌ಪರ್ಟ್ ಸಂಸ್ಥೆಯಲ್ಲಿ ಎಕ್ಸ್‌ಪರ್ಟ್ ಉತ್ಸವ': ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು,ಡಾ ಚನ್ನವೀರ ಶಿವಾಚಾರ್ಯರು

​ಮುದ್ದೇಬಿಹಾಳ: ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣವು ಹುಲಿ ಹಾಲಿನಂತಿದೆ, ಅದನ್ನು  ಕುಡಿದವರು ಮಕ್ಕಳು ಗರ್ಜಿಸಲೇಬೇಕು. ಕೇವಲ ಶಾಲೆಯ ಬೋರ್ಡ್‌ಗಳು ಶಿಕ್ಷಣ ನೀಡುವುದಿಲ್ಲ, ಮಕ್ಕಳಲ್ಲಿ ಕಠಿಣ ಪರಿಶ್ರಮ ಮತ್ತು ಸಾಧಿಸುವ ಛಲವಿರಬೇಕು, ಎಂದು ಖ್ಯಾತ ವಾಗ್ಮಿ ಹಾಗೂ ಸಾಹಿತ್ಯ ರತ್ನ ಶಿವಶರಣಪ್ಪ ಶಿರೂರ ಹೇಳಿದರು.
ತಾಲೂಕಿನ ನಾಗರಬೆಟ್ಟದ ಪ್ರತಿಷ್ಠಿತ ಬಸ್ ನಿಲ್ದಾಣದ ಹತ್ತಿರವಿರುವ ಆಕ್ಸ್‌ಫರ್ಡ್ ಮಠ್ಸ್ (SDE Trust) ಸಂಸ್ಥೆಯ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ಎಕ್ಸ್‌ಪರ್ಟ್ ಉತ್ಸವ 2025-26' ರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
​ಸಂಸ್ಕಾರಯುತ ಶಿಕ್ಷಣವೇ ಬದುಕಿನ ಭದ್ರ ಬುನಾದಿ
​ಮುಂದುವರಿದು ಮಾತನಾಡಿದ ಅವರು, 623 ಹೆಚ್ಚು  ಅಂಕಗಳನ್ನು ಪಡೆಯುವ ಗುರಿ ಮಕ್ಕಳಲ್ಲಿರಬೇಕು. ಈ ಸಂಸ್ಥೆಯು ಕೇವಲ ಪಾಠವನ್ನಷ್ಟೇ ಅಲ್ಲದೆ, ಉತ್ತಮ ಸಂಸ್ಕಾರವನ್ನೂ ಕಲಿಸುತ್ತಿದೆ. ಗ್ರಾಮೀಣ ಭಾಗದ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳು ಎಪಿಜೆ ಅಬ್ದುಲ್ ಕಲಾಂ, ಛತ್ರಪತಿ ಶಿವಾಜಿಯಂತಹ ಮಹಾನ್ ವ್ಯಕ್ತಿಗಳ ಕನಸನ್ನು ನನಸು ಮಾಡುವ ಗುರಿ ಹೊಂದಬೇಕು," ಎಂದರು.
 ಕುಂಟೋಜಿಯ ಭಾವೈಕ್ಯತಾ ಸಂಸ್ಥಾನ ಹಿರೇಮಠದ ಷ.ಬ್ರ. ಡಾ. ಶ್ರೀಗುರು ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಅವರ ಮಾತನಾಡಿದ, "ಬಿ.ಜಿ. ಮಠ ಅವರ 30 ವರ್ಷಗಳ ಅವಿರತ ಪರಿಶ್ರಮದಿಂದ ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಇಡೀ ಜಿಲ್ಲೆಯಲ್ಲೇ ವಸತಿ ಶಾಲೆಯ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು," ಎಂದು ಕರೆ ನೀಡಿದರು.
​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಇ ಟ್ರಸ್ಟ್ ಅಧ್ಯಕ್ಷ ಬಿ. ಜಿ. ಮಠ ಮಾತನಾಡಿ, "ಜೀವನದಲ್ಲಿ ಹಣಕ್ಕಿಂತ ಒಳ್ಳೆಯ ಗುಣ ಮತ್ತು ಸಂಸ್ಕೃತಿ ಮುಖ್ಯ. ವಿದ್ಯಾರ್ಥಿಗಳು ದುರಾಸೆ ಬಿಟ್ಟು, ಗುರಿ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಂದೆ-ತಾಯಿ ಹಾಗೂ ಶಾಲೆಗೆ ಕೀರ್ತಿ ತರಬೇಕು," ಎಂದರು.
​ಇದೇ ಸಂದರ್ಭದಲ್ಲಿ ಎಕ್ಸಪರ್ಟ್ ಕಾಲೇಜಿನಲ್ಲಿ ಓದಿ ವೈದ್ಯಕೀಯ,(ಮೆಡಿಕಲ್) ಸೀಟು ಪಡೆದ ಸಾಧಕ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ  ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಿದ್ದಯ್ಯ ಮಠ, ಆಡಳಿತಾಧಿಕಾರಿ ಪ್ರಜ್ವಲ್ ಬಿ. ಮಠ, ಪ್ರಾಂಶುಪಾಲರಾದ ಆರ್. ಎ. ಬಾಗವಾನ್,ಎಸ್ ಡಿ ಕೆ ಪ್ರೌಢಶಾಲಾ ಮುಖ್ಯಗುರು ವಿರೂ ನಾಯಕ, ಶಿವಯ್ಯ ಹಿರೇಮಠ,ಆರ್ ಎಂ ಪೂಜಾರಿ,ಸೇರಿದಂತೆ ಹಲವು ಗಣ್ಯರು, ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ