E-PAPER
25 Nov 2026, 01:38:03 AM|
Gold₹12519/gGold24K ₹12,519/g - 22K ₹11,465/gTap for full detailsWEATHER24°AQI 97WeatherBelagavi · 24° · Partly cloudyTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಂಸ್ಕಾರ ಕಲಿತ ಮಕ್ಕಳು ಭ್ರಷ್ಟನಾಗಲು ಸಾಧ್ಯವಿಲ್ಲ..! ಮಂಜುನಾಥ

ಸಂಸ್ಕಾರ ಕಲಿತ ಮಕ್ಕಳು ಭ್ರಷ್ಟನಾಗಲು ಸಾಧ್ಯವಿಲ್ಲ..! ಮಂಜುನಾಥ

ಇಂಡಿ:  ಅಕ್ಷರ ಕಲಿತ ಮಕ್ಕಳು ಭ್ರಷ್ಟರಾಗಬಹುದು. ಆದರೆ ಸಂಸ್ಕಾರ ಕಲಿತ ಮಕ್ಕಳು  ಎಂದಿಗೂ ಭ್ರಷ್ಟನಾಗಲು ಸಾಧ್ಯವಿಲ್ಲ ಎಂದು ಅಂಕಣಕಾರ, ಸಾಹಿತಿ, ಮಂಜುನಾಥ ಜುನಗೊಂಡ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕ್ರೀಡಾ  ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶ ಕಟ್ಟುವಲ್ಲಿ ಯುವ ವಿದ್ಯಾರ್ಥಿ ಸಮೂಹ ಎಡಬಲ ಆಲೋಚನೆಗಳಲ್ಲಿ ಮುಳುಗದೆ ಹೆಚ್ಚು ಸಕ್ರಿಯವಾಗಬೇಕಿದೆ. ಇಂದು ನಮ್ಮತನ ಬೆಳಿಸಿಕೊಳ್ಳಬೇಕಿದೆ. ಹಲಸಂಗಿ ಗೆಳೆಯರು ನಮ್ಮ ನೆಲದ ಅಸ್ಮಿತೆ. ಅಂತಹವರ ಬಗ್ಗೆ ಅರಿತುಕೊಳ್ಳಬೇಕಿದೆ, ನಮ್ಮವರ ಬಗ್ಗೆ ತಿಳಿದುಕೊಳ್ಳದೇ ಜಾಗತಿಕ ಸಂಗತಿಗಳನ್ನು ತಿಳಿದುಕೊಳ್ಳಲು ಹಂಬಲಿಸುತ್ತಿರುವ ಯುವ ಸಮೂಹದ ನಡೆ ನಿಜಕ್ಕೂ ವಿಷಾಧಕರ ಸಂಗತಿಯಾಗಿದೆ ಎಂದರು.
ಪ್ರಾಚಾರ್ಯ ಪ್ರೊ. ಆರ್.ಎಚ್. ರಮೇಶ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಕಾಲೇಜು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಷಾ ಯೋಜನೆಗೆ ಆಯ್ಕೆಯಾಗಿದ್ದು, ರೂ. ೫ಕೋಟಿ ಮಂಜೂರು ಮಾಡಿದೆ, ಅದನ್ನು ಅತ್ಯಂತ ಪಾರದರ್ಶಕವಾಗಿ ಬಳಕೆ ಮಾಡಿಕೊಂಡು ಕಾಲೇಜಿನ ಶೈಕ್ಷಣಕ ಮತ್ತು ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂಡಿ ಮಾದರಿಯಾಗಿ ಮಾಡಲು ಎಲ್ಲ ರೀತಿಯಂದಲೂ ಪ್ರಯತ್ನಸಲು ಹಳೆಯ ವಿದ್ಯಾರ್ಥಿಗಳ ಸಹಕಾರವು ಅವಶ್ಯಕವಾಗಿ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ವಿವಿಧ ಸ್ಪರ್ಧೆಗಳಲ್ಲಿ  ವಿಜೇತರಾದವರಿಗೆ ಬಹುಮಾನ ಹಾಗೂ ಪದಕಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಲ್ಲಾಭಕ್ಷ ವಾಲಿಕಾರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಕಿರಣ ರೇವಣಕರ, ಐಕ್ಯೂಎಸಿ ಸಂಚಾಲಕರಾದ ಡಾ. ಶಿರೀನುಸುಲ್ತಾನ ಇನಾಂದಾರ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ವಿಜಯಮಹಾಂತೇಶ ದೇವರ, ಗ್ರಂಥಪಾಲಕರಾದ ಪ್ರೊ.ತಿಪ್ಪಣ್ಣ ವಾಗ್ದಾಳ, ಪ್ರೊ.ರಾಜಲಕ್ಷ್ಮಿ  ಆರ್,  ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ಪರಸಪ್ಪ ದೇವರ, ಸತೀಶಕುಮಾರ ಚುಂಚೂರು, ಸೋಮಲಿಂಗ ಗಂಜಿ, ಡಾ. ಸುರೇಖಾ ವಾರದ, ಪ್ರೊ. ಕಾಶೀನಾಥ ಜಾಧವ ಮೊದಲಾದವರು ಉಪಸ್ಥಿತರಿದ್ದರು.
ವಾರ್ಷಿಕ ವರದಿ ವಾಚನವನ್ನು ಡಾ. ತ್ರಿವೇಣ  ಬನಸೊಡೆ ಮಂಡಿಸಿದರು. ಪ್ರೊ. ಎಸ್. ಜೆ. ಮಾಡ್ಯಾಳ ಸ್ವಾಗತಿಸಿದರು. ಪ್ರೊ. ಕವೀಂದ್ರ ಚಾಬುಕಸ್ವಾರ ನಿರೂಪಿಸಿದರು. ಪ್ರೊ. ಎಮ್.ಎಚ್. ಮೋಮಿನ್ ವಂದಿಸಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕ್ರೀಡಾ  ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕ ಮಂಜುನಾಥ ಜುನಗೊಂಡ ಮಾತನಾಡಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ