E-PAPER
25 Nov 2026, 04:40:22 AM|
Gold₹12519/gGold24K ₹12,519/g - 22K ₹11,465/gTap for full detailsWEATHER22°AQI 89WeatherBelagavi · 22° · Clear skyTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮಾಚ್‌ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ ​

ಮಾಚ್‌ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ

​
ಮುದ್ದೇಬಿಹಾಳ: ದಶಕಗಳ ಕನಸಾದ ರಂಭಾಪುರಿ ಶಾಖಾಮಠದ ಸ್ಥಾಪನೆಗೆ ಕಾಲ ಕೂಡಿ ಬಂದಿದ್ದು, ಮಾಚ್‌ 14 ರಂದು ವಿಜಯಪುರದಲ್ಲಿ ಶಾಖಾಮಠದ ಭೂಮಿ ಪೂಜೆ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸೋಮಯ್ಯ ಗಣಾಚಾರಿ ತಿಳಿಸಿದರು.
​ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "2008 ರಿಂದಲೇ ರಂಭಾಪುರಿ ಶಾಖಾಮಠ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಜಿಲ್ಲೆಗೆ ಆಗಮಿಸುವ ಪಂಚಪೀಠಗಳ ಜಗದ್ಗುರುಗಳಿಗೆ ತಂಗಲು ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಮಠ ನಿರ್ಮಾಣವಾಗುತ್ತಿದೆ," ಎಂದರು. ಕಾರ್ಯಕ್ರಮದ ನಡೆಯುವ ​ದಿನಾಂಕ: 14-03-2026, ಶನಿವಾರ ​ಸಮಯ: ಸಂಜೆ 4:00 ಗಂಟೆಗೆ ಸುರಭಿ ಸಿದ್ದೇಶ್ವರ ಲೇಔಟ್, ನವರಸಪುರ, ವಿಜಯಪುರದಲ್ಲಿ ನಡೆಯಲಿದೆ.
​ಸನ್ನಿಧಾನ: ರಂಭಾಪುರಿ ಜಗದ್ಗುರುಗಳಾದ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ​ಸಚಿವ ಎಂ.ಬಿ. ಪಾಟೀಲರು ಈ ಕಾರ್ಯಕ್ರಮದ ಕುರಿತು ವಿಶೇಷ ಕಾಳಜಿ ವಹಿಸಿ ಆಯೋಜನೆ ಮಾಡಿದ್ದು, ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
​ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷರಾದ ದಾನಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, "ಪಂಚಪೀಠಗಳಲ್ಲಿ ಪ್ರಮುಖವಾದ ರಂಭಾಪುರಿ ಪೀಠದ ಶಾಖಾಮಠ ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಎಂ.ಬಿ. ಪಾಟೀಲರ ನೇತೃತ್ವದಲ್ಲಿ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು," ಎಂದು ಮನವಿ ಮಾಡಿದರು.
​ಈ ಸಂದರ್ಭದಲ್ಲಿ ಪ್ರಮುಖರಾದ ಅಶೋಕ ನಾಡಗೌಡ, ಸಿದ್ದಯ್ಯ ಕಲ್ಯಾಣಮಠ, ಸಿದ್ದಯ್ಯ ಸರಗಣಾಚಾರಿ, ಅರವಿಂದ ಅದ್ದಿಮಠ, ಮಹಾಂತೇಶ ಬೂದಿಹಾಳಮಠ, ಸದಾಶಿವ ಮಠ, ಶಿವಾನಂದ ಹಿರೇಮಠ, ಗೌರಿಶಂಕರ ಪುರಾಣಿಕಮಠ, ಚಂದ್ರಶೇಖರ ಶಿವಯೋಗಿಮಠ, ಮಹಾಂತೇಶ ಮಠಪತಿ, ಗುರಯ್ಯ ಮುನ್ನೂರಮಠ, ಸಿ.ಎನ್. ಹಿರೇಮಠ, ಶ್ರೀಕಾಂತ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ