E-PAPER
25 Nov 2026, 03:54:29 AM|
Gold₹12215/gGold24K ₹12,215/g - 22K ₹11,197/gTap for full detailsWEATHER23°AQI 92WeatherBelagavi · 23° · Mainly clearTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪದ್ಮಭೂಷಣ ಪುಟ್ಟರಾಜ ಕವಿಗವಾಯಿ "ರಾಷ್ಟ್ರೀಯ ಪ್ರಶಸ್ತಿ" ಪ್ರದಾನ

ಪದ್ಮಭೂಷಣ ಪುಟ್ಟರಾಜ ಕವಿಗವಾಯಿ "ರಾಷ್ಟ್ರೀಯ ಪ್ರಶಸ್ತಿ" ಪ್ರದಾನ

ವಿಜಯಪುರ : ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಮಾಡಿದ ಸಾಧನೆಗಾಗಿ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ, ಸಾಹಿತಿ ಪ್ರೊ. ಸಿದ್ದು ಸಾವಳಸಂಗ ಅವರಿಗೆ "ಪದ್ಮಭೂಷಣ ಪುಟ್ಟರಾಜ ಕವಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ" ಪ್ರದಾನ ಮಾಡಲಾಯಿತು.

ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ 03 ಮಾರ್ಚ್ ರಂದು‌ ಚೇತನ ಫೌಂಡೇಶನ್ ಕರ್ನಾಟಕ ಇವರ ವತಿಯಿಂದ ಸಂಗೀತ ಸಾಮ್ರಾಟ ಗಾನ ವಿಶಾರದ ಡಾಕ್ಟರ್ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ 110 ನೆಯ ಜಯಂತಿ ಕಾರ್ಯಕ್ರಮದಲ್ಲಿ ಮುಕ್ತ ಕವಿಗೋಷ್ಠಿ ಮತ್ತು ಸಂಗೀತ ಹಾಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪ್ರೊ. ಸಿದ್ದು ಸಾವಳಸಂಗ ಅವರು 27 ವರ್ಷಗಳಿಂದ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಿಂದ ಉಪನ್ಯಾಸಕರಾದ ಇವರು ಪ್ರವೃತ್ತಿಯಿಂದ ಸಾಹಿತಿಗಳು. ಈಗಾಗಲೇ ಇವರಿಗೆ ರಾಷ್ಟ್ರಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ದೊರೆತಿದೆ. ಇವರು ಈಗಾಗಲೇ "ಹೃದಯ ಹೂವಿನ ಹಂದರ" ಹನಿಗವನ ಸಂಕಲನ ಹಾಗೂ "ವಚನ ಸಂಜೀವಿನಿ" ಆಧುನಿಕ ವಚನಗಳ ಸಂಕಲನಗಳನ್ನು ಹೊರತಂದಿದ್ದು ಅವು ಓದುಗರ ಮೆಚ್ಚುಗೆಯನ್ನು ಗಳಿಸಿಕೊಂಡಿವೆ. ಕವನ, ಹನಿಗವನ, ಲೇಖನ, ಕಥೆ, ವಿಮರ್ಶಾ ಬರಹ, ಆಧುನಿಕ ವಚನಗಳು ಹಾಗೂ ಅಂಕಣ ಬರಹಗಳನ್ನು ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಇವರ ಈ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಮೇಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಸದರಿ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಹಿರಿಯ ಕವಿಗಳಾದ ನೀ ಶ್ರೀಶೈಲ, ಮುಖ್ಯ ಅತಿಥಿಗಳಾದ ವಿದೂಷಿ ಶ್ರೀಮತಿ ವನಮಾಲ ಮಾನಶೆಟ್ಟಿ ಹಾಗೂ ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ್ ಮಾಡಲಗೇರಿ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಪ್ರೊ. ಸಿದ್ದು ಸಾವಳಸಂಗ ಇವರಿಗೆ "ಪದ್ಮಭೂಷಣ ಪುಟ್ಟರಾಜ ಕವಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ"ಯನ್ನು ಪ್ರದಾನ ಮಾಡಲಾಯಿತು. ನಾಡಿನ ಬೇರೆ ಬೇರೆ ಭಾಗಗಳಿಂದ ನೂರಾರು ಸಾಹಿತ್ಯಾಸಕ್ತರು, ಸಂಗೀತ ಪ್ರೇಮಿಗಳು ಹಾಗೂ ಪ್ರೇಕ್ಷಕರು ಆಗಮಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ