ಮುದ್ದೇಬಿಹಾಳ ;ಧಾರ್ಮಿಕ ಕೇಂದ್ರಗಳೇ ಗ್ರಾಮ ಪಟ್ಟಣಗಳ ನಿಜವಾದ ಆಸ್ತಿ ಹೀಗಾಗಿ ನಮ್ಮ ಧಾರ್ಮಿಕ ಶ್ರದ್ದಾಕೇಂದ್ರ ಚೊಕ್ಕಟವಾಗಿ ಇಟ್ಟುಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ್ ಹೇಳಿದರು ಮಂಗಳವಾರ ಪಟ್ಟಣದ ವಿನಾಯಕ ನಗರದ ಶ್ರೀ ವಿನಾಯಕ ಹಾಗೂ ಭದ್ರಕಾಳಿ ಸಮೇತ ಶ್ರೀ
ವೀರಭದ್ರೇಶ್ವರ ದೇವಸ್ಥಾನಕ್ಕೆ ಜೀರ್ಣೋದ್ಧಾರಕ್ಕೆ ಸುಕ್ಷೇತ್ರ ಧರ್ಮಸ್ಥಳದಿಂದ ₹1 ಲಕ್ಷ ರೂ ಡಿಡಿ ವಿತರಣೆ ಮಾಡಿ ಮಾತನಾಡಿದರು .
ದೇವಸ್ಥಾನದ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಪ್ರಸಾದರೂಪದಲ್ಲಿ ಧನಸಹಾಯ ನೀಡಿದ್ದಾರೆ. ದೇವಾಲಯದ ಉಳಿವು ಮತ್ತು ಜೀರ್ಣೋದ್ಧಾರದಿಂದ ಧಾರ್ಮಿಕ ಶ್ರದ್ಧೆಗೆ ಸಹಕಾರಿಯಾಗಿದೆ .
ಧರ್ಮಸ್ಥಳ ಸಂಘ ರಾಜ್ಯದೆಲ್ಲಡೆ ನಿರ್ಗತಿಕರಿಗೆ ತಿಂಗಳ ಮಾಶಾಸನ ವಾತ್ಸಲ್ಯ ಮನೆ, ಅತ್ಯಂತ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ರಚನೆ, ವ್ಯಸನ ಮುಕ್ತ ಶಿಬಿರ ,ಹಾಲು ಉತ್ಪನ್ನ ,ಶಾಲೆಗಳಿಗೆ ಪೀಠೋಪಕರಣ ಶಾಲೆಗಳಿಗೆ ಶಿಕ್ಷಕರ ಪೂರೈಕೆ, ದಿವ್ಯಾಂಗ ಚೇತನರಿಗೆ ಅಗತ್ಯ ಪರಿಕರಗಳನ್ನು ನೀಡುತ್ತಾ ಬಂದಿದೆ ಎಂದರು.
ಈ ವೇಳೆ ಜನಜಾಗೃತಿ ವೇದಿಕೆ ಸದಸ್ಯೆ ಸಂಗೀತ ನಾಡಗೌಡ,ದಿ. ಕರ್ನಾಟಕ ಕೋ ಬ್ಯಾಂಕ್ ನಿರ್ದೇಶಕ ಸತೀಶ್ ಓಸ್ವಾಲ್, ಚೇತನ ಕಲ್ಲುಂಡಿ, ಸುಮಾ ಪುತಾಣಿಕಮಠ ಮಾತನಾಡಿ ಧರ್ಮಸ್ಥಳ ಸಂಘದ ಜನಪರ ಕಾರ್ಯಗಳು ಶ್ಲಾಘನೀಯ ಮತ್ತು ಮಾದರಿಯಾಗಿವೆ ಎಂದರು
ವಿನಾಯಕ ದೇವಾಲಯ ಸಮಿತಿಯ ವಿಶ್ವನಾಥ ನಾಗಠಾಣ ಸೋಹೇಲ್ ನಾಗಠಾಣ ಬಸಣ್ಣ ತಟ್ಟಿ ಅವರಿಗೆ ಸುಕ್ಷೇತ್ರ ಧರ್ಮಸ್ಥಳದ 1 ಲಕ್ಷ ರೂ ಡಿಡಿ ವಿತರಿಸಿದರು.
ಈ ವೇಳೆ ಕೃಷಿ ಅಧಿಕಾರಿ ಅರವಿಂದ ಹೂಗಾರ, ವಿಜಯಪುರ ಜಿಓಸಿಸಿ ಜಿಲ್ಲಾಧ್ಯಕ್ಷ ಆನಂದಗೌಡ ಬಿರಾದಾರ ,ಅನುರಾಧ ಪ್ಯಾಟಿಗೌಡರ, ಮಲ್ಲಣ್ಣ ಲಕ್ಷಟ್ಟಿ, ಬಸವಂತರಾಯ ದೇಶಪಾಂಡೆ, ಸಿ.ಎಸ್ ಗುಡ್ಡದ, ಡಾ.ವಿರೇಶ ಪಾಟೀಲ, ವಿನೋದ ನಾಗಠಾಣ, ಕಿರಣ್ ನಾಗಠಾಣ, ಪ್ರಮೋದ ನಾಗಠಾಣ, ಗಂಗಪ್ಪ ಹೆಬ್ಬಾಳ, ಕಾಂತು ಹೆಬ್ಬಾಳ, ಭಾಗ್ಯ ಹೆಬ್ಬಾಳ, ವಿದ್ಯಾ ಬಡಿಗೇರ, ಶೋಭಾ ಚಳಗೇರಿ, ಮಹಾದೇವಿ ಹಿರೇಮಠ, ಶೋಭಾ ನಾಗಠಾಣ, ಪಾರ್ವತಿ ಗಣಕುಮಾರಮಠ ಸೇರಿದಂತೆ ಹಲವರು ಭಾಗವಹಿಸಿದ್ದರು